ಆಹಾರ ಆಗಲು ಜೀರ್ಣ, ಸೇವಿಸಿ ಬೃಹತ್ರಿ ಹಿಂಗ್ವಾಷ್ಟಕ ಚೂರ್ಣ
ಆಹಾರ ಆಗಲು ಜೀರ್ಣ,
ಸೇವಿಸಿ ಬೃಹತ್ರಿ ಹಿಂಗ್ವಾಷ್ಟಕ ಚೂರ್ಣ
ಜೀವನವೆಂದರೆ ಅದು ಸಂತೋಷ, ಮೋಜು, ಮಸ್ತಿ, ನೋವು, ವಿಷಾದ ಇವೆಲ್ಲವುಗಳ ಮಿಶ್ರಣ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಯಾವಾಗಲೂ ಸುಂದರ ಕ್ಷಣಗಳನ್ನೇ ನಿರೀಕ್ಷಿಸುತ್ತಾನೆ. ಆದರೆ ಕೆಲವೊಮ್ಮೆ ಆರೋಗ್ಯದ ಸಮಸ್ಯೆ ಎಲ್ಲ ಸಂತೋಷವನ್ನೂ ಬಲಿ ತೆಗೆದುಕೊಂಡುಬಿಡುತ್ತದೆ. ನೀವು ಯಾವುದೋ ಪಾರ್ಟಿಗೆ ಹೋಗಿರುತ್ತೀರಿ ಅಥವಾ ಯಾರದೋ ಮನೆಯ ಕಾರ್ಯಕ್ರಮಕ್ಕೆ ಹೋಗಿರುತ್ತೀರಿ. ಎಲ್ಲರೂ ಖುಷಿಯಿಂದ ಮಾತಾಡಿಕೊಂಡು, ಊಟ-ತಿಂಡಿಯಲ್ಲಿ ಮಗ್ನರಾಗಿದ್ದರೆ ನೀವು ಮಾತ್ರ ಹೊಟ್ಟೆನೋವಿನಿಂದ ಬಳಲುತ್ತಾ ಮೂಲೆಯಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಒದಗಿಬಿಡುತ್ತದೆ. ಇಂಥ ಸಂದರ್ಭವನ್ನು ಹಲವು ಬಾರಿ ನೀವು ಎದುರಿಸಿರಬಹುದು. ಅಂದರೆ ಹೊಟ್ಟೆ ನಮ್ಮ ದೇಹದ ಬಹುಮುಖ್ಯ ಅಂಗ. ಅಷ್ಟೇ ಅಲ್ಲ, ಅದರ ಆರೋಗ್ಯ ನಿಮ್ಮ ಸಂತೋಷವನ್ನು ನಿರ್ಧರಿಸುತ್ತದೆ.
ಸಾಮಾನ್ಯವಾಗಿ ಹೊಟ್ಟೆಯಲ್ಲಿ ಉಂಟಾಗುವ ಸಮಸ್ಯೆಯೆಂದರೆ ಜೀರ್ಣಕ್ರಿಯೆಯದ್ದು. ಇದರ ಜೊತೆಗೆ ಗ್ಯಾಸ್ ಸಮಸ್ಯೆ ಕೂಡ. ಇದರಿಂದ ಉಂಟಾಗುವ ಸಮಸ್ಯೆಗಳೆಂದರೆ ಎದೆಯುರಿ, ಹುಳಿತೇಗು, ಹಸಿವಾಗದಿರುವುದು ಇತ್ಯಾದಿ. ಈ ಒಂದು ಸಮಸ್ಯೆ ನಿಮ್ಮಲ್ಲಿದೆಯೆಂದಾದರೆ ಮುಗಿಯಿತು, ನಿಮ್ಮ ರಸಮಯ ಕ್ಷಣಗಳನ್ನು ನೀರಸಮಯವಾಗಿಸಬಲ್ಲವು. "ಎಲ್ಲಾರು ಮಾಡುವುದು ಹೊಟ್ಟೆಗಾಗಿ". ಆದರೆ ಆ ಹೊಟ್ಟೆಯೇ ಸರಿಯಿಲ್ಲವೆಂದರೆ? ಅದರಂಥ ಸಮಸ್ಯೆ ಇನ್ನೊಂದಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಕ್ಷಣದಲ್ಲಿ ಗುಣಪಡಿಸುವ ಹೆಸರಿನಲ್ಲಿ ನಿಮಗೆ ಮಾರುಕಟ್ಟೆಯಲ್ಲಿ ಬೇಕಾದಷ್ಟು ಔಷಧಗಳು ದೊರೆಯುತ್ತವೆ. ಆದರೆ, ಅವ್ಯಾವುದು ಕೂಡ ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ, ಪ್ರಾಚೀನ ಗ್ರಂಥಗಳನ್ನಾಧರಿಸಿದ ಆಯುರ್ವೇದಿಯ ಔಷಧದಷ್ಟು ಪರಿಣಾಮಕಾರಿಯೂ ಅಲ್ಲ, ನಿಮ್ಮ ಆರೋಗ್ಯಸ್ನೇಹಿಯಂತೂ ಅಲ್ಲವೇ ಅಲ್ಲ.
ಹೊಟ್ಟೆಯಲ್ಲಾಗುವ ಈ ಅಜೀರ್ಣಪ್ರಕ್ರಿಯೆಯೇ ಮೊದಲಾದ ಎಲ್ಲ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಪರಿಹಾರವಿದೆ. ಆಯುರ್ವೇದವು ಹೊಟ್ಟೆಯಲ್ಲಾಗುವ ಗ್ಯಾಸ್ ಸಮಸ್ಯೆಗೆ ಹಿಂಗ್ವಾಷ್ಟಕ ಚೂರ್ಣದ ಸೇವನೆಯನ್ನು ಸೂಚಿಸುತ್ತದೆ. ಇದೇನು ಹೊಸದಲ್ಲ. ಪ್ರಾಚೀನಕಾಲದಿಂದಲೂ ನಮ್ಮ ಮನೆಗಳಲ್ಲಿ ಹಿರಿಯರು ಹೊಟ್ಟೆಯಲ್ಲಾಗುವ ಅಜೀರ್ಣ, ಆಮ್ಲೀಯ ಸಮಸ್ಯೆ, ಗ್ಯಾಸಿನ ಸಮಸ್ಯೆಗಳಿಗೆಲ್ಲ ಹಿಂಗ್ವಷ್ಟಕವನ್ನು ಉಪಯೋಗಿಸುತ್ತಲೇ ಬಂದಿದ್ದಾರೆ. ಹಿಂಗ್ವಾಷ್ಟಕವು ಉದರ ಸಂಬಂಧಿ ಎಲ್ಲ ಖಾಯಿಲೆಗಳಿಗೂ ರಾಮಬಾಣವಷ್ಟೇ ಅಲ್ಲ, ಹೊಟ್ಟೆಯಲ್ಲಿ ಉತ್ಪನ್ನಗೊಳ್ಳುವ ಎಲ್ಲ ಸಮಸ್ಯೆಗಳಿಗೂ ಸರ್ವೌಷಧವಿದು. ಇಡೀ ದೇಹದ ಆರೋಗ್ಯದ ಗುಟ್ಟು ನಿಮ್ಮ ಉದರದ ಆರೋಗ್ಯದಲ್ಲಿದೆ. ಹೊಟ್ಟೆಯೊಂದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೆಂದಾದರೆ ನೀವು ನಿಜಾರ್ಥದಲ್ಲಿ ಸುಖಿಗಳು. ನಾವು ತಿಂದದ್ದು ಸರಿಯಾಗಿ ಜೀರ್ಣವಾಗುತ್ತಿದ್ದರೆ ನಮ್ಮ ಬಳಿ ಯಾವ ಖಾಯಿಲೆಯೂ ಸುಳಿಯುವುದಿಲ್ಲ. ಹಾಗಾಗಿ ‘ಸ್ವಚ್ಛ ಭಾರತ ಅಭಿಯಾನ’ ಮೊದಲು ಪ್ರಾರಂಭಗೊಳ್ಳಬೇಕಿರುವುದು ಹೊಟ್ಟೆಯಿಂದಲೇ.
ಹಿಂಗ್ವಾಷ್ಟಕದಲ್ಲಿ ಏನೇನೆಲ್ಲ ಇರುತ್ತೆ?
ಹಿಂಗ್ವಾಷ್ಟಕ ಚೂರ್ಣವು ಅತ್ಯಂತ ಸುರಕ್ಷಿತ ಆಯುರ್ವೇದಿಯ ಪದ್ಧತಿಯಲ್ಲಿ ನಿರ್ಮಿತವಾದ ಮೂಲಿಕಾ ಮಿಶ್ರಣವಾಗಿದ್ದು, ಹಿಂಗು, ಒಣಶುಂಠಿ, ಕರಿಮೆಣಸು, ಹಿಮಾಲಯನ್ ಪರ್ವತಗಳಲ್ಲಿ ಬೆಳೆಯುವ ಉದ್ದದ ಮೆಣಸು, ಕಲ್ಲುಪ್ಪು, ಕಪ್ಪು ಜೀರಿಗೆ ಹಾಗೂ ಅಜ್ವೈನ್ ಗಳಂಥ ಶುದ್ಧ ಆರೋಗ್ಯಕಾರಕಗಳಿಂದ ಕೂಡಿದ್ದಾಗಿದೆ.
ಉದರ ಸಂಬಂಧಿ ಖಾಯಿಲೆಯ ಲಕ್ಷಣಗಳೇನು?
ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ
ಅಜೀರ್ಣ
ಹೊಟ್ಟೆನೋವು
ಹುಳಿತೇಗು
ನಾಲಗೆ ರುಚಿಹೀನವಾಗುವಿಕೆ
ಪಿತ್ಥ ಜಾಸ್ತಿಯಾಗುವುದು ಇತ್ಯಾದಿ
ಹಿಂಗ್ವಾಷ್ಟಕ ಚೂರ್ಣದ ಬಗ್ಗೆ ಸಂಶೋಧನೆಗಳು ಏನು ಹೇಳುತ್ತವೆ?
ಹಿಂಗ್ವಾಷ್ಟಕ ಚೂರ್ಣದ ಬಗೆಗೆ ಅನೇಕ ಸಂಶೋಧನೆಗಳು ನಡೆದಿದ್ದು ಇದರ ಸುರಕ್ಷತೆಯನ್ನು ಪ್ರಮಾಣೀಕರಿಸಿವೆ. ಅಲ್ಲದೇ ಜೀರ್ಣ ಪ್ರಕ್ರಿಯೆಯನ್ನು ಸರಾಗಗೊಳಿಸುವಲ್ಲಿ ಈ ಚೂರ್ಣ ಅತ್ಯಂತ ಉಪಯುಕ್ತವೆಂದು ಸಾಬೀತುಪಡಿಸಿವೆ. ಹಿಂಗ್ವಾಷ್ಟಕ ಚೂರ್ಣವು ಎದೆಯುರಿ ಹಾಗೂ ಅಜೀರ್ಣವನ್ನು ತೊಡೆದುಹಾಕುವಲ್ಲಿ ಸಮರ್ಥವಾಗಿದೆ ಎಂದು ವೈಜ್ಞಾನಿಕ ಅಧ್ಯಯನಗಳು ದೃಢಪಡಿಸಿವೆ. ಇದನ್ನು ಉಪಯೋಗಿಸಿದ ಬಳಕೆದಾರರೂ ಕೂಡ ಈ ಚೂರ್ಣವು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಶೀಘ್ರದಲ್ಲಿ ಉಪಶಮನಗೊಳಿಸುವುದಷ್ಟೇ ಅಲ್ಲದೇ ಅಜೀರ್ಣ ಸಮಸ್ಯೆಗೂ ಪರಿಹಾರ ಒದಗಿಸುತ್ತದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಹಿಂಗ್ವಾಷ್ಟಕ ಚೂರ್ಣದ ಉಪಯೋಗಗಳೇನು?
• ಹಿಂಗ್ವಾಷ್ಟಕ ಚೂರ್ಣವು ಗ್ಯಾಸ್ಟ್ರಿಕ್ ಸಮಸ್ಯೆಗೆ, ಹೊಟ್ಟೆ ಉಬ್ಬರಿಸುವ ಸಮಸ್ಯೆಗೆ, ಹೊಟ್ಟೆಯೊಳಗಿನೆ ಸೆಳೆತಗಳಿಗೆ ಪರಿಣಾಮಕಾರಿಯಾದ ಸಾಧನವಾಗಿದೆ.,
• ಇದು ದೇಹದ ವಿಸರ್ಜನ ಕ್ರಿಯೆ ಅಥವಾ ಚಯಾಪಚಯ ಕ್ರಿಯೆಯನ್ನು ಸರಾಗಗೊಳಿಸುತ್ತದೆ
• ಇದು ಹಸಿವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
• ಮಲಬದ್ಧತೆ, ಜಠರದಲ್ಲಾಗುವ ವಾಯು, ಮೂತ್ರದ ಸಮಸ್ಯೆ ಹಾಗೂ ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ.
• ಇದು ಪಚನ ಕ್ರಿಯೆಯನ್ನು ಸರಿಯಾಗಿ ಇಡುತ್ತದೆ, ಜೊತೆಗೆ ಮಲ ಗಟ್ಟಿಯಾಗುವುದು, ಲೂಸ್ ಮೋಶನ್, ಹೊಟ್ಟೆಯಲ್ಲಿ ಉಷ್ಣತೆ ಇತ್ಯಾದಿಗಳನ್ನು ನಿವಾರಿಸುತ್ತದೆ.
ಹಿಂಗ್ವಾಷ್ಟಕ ಚೂರ್ಣವನ್ನು ಸ್ವೀಕರಿಸಬೇಕಾದ ಪ್ರಮಾಣ:
ಉತ್ತಮ ಫಲಿತಾಂಶಕ್ಕಾಗಿ ಪ್ರತಿ ನಿತ್ಯ ಎರಡು ಬಾರಿ ತಲಾ ಮೂರು ಗ್ರಾಂನಷ್ಟು ಸ್ವೀಕರಿಸಬೇಕು. ಅಥವಾ ಆಯುರ್ವೇದಿಕ್ ವೈದ್ಯರ ಸಲಹೆಯಂತೆಯೂ ಇದನ್ನು ಸ್ವೀಕರಿಸಬಹುದು. ಇದನ್ನು ತೆಗೆದುಕೊಳ್ಳುವಾಗ ತುಪ್ಪದೊಂದಿಗೆ ಕಲಸಿ ತಿನ್ನುವುದು ಹೆಚ್ಚಿನ ಪರಿಣಾಮಕಾರಿ. ಇದನ್ನು ಎರಡು ಅಥವಾ ಮೂರು ಬಾರಿ ಊಟಕ್ಕೆ ಮೊದಲು ತೆಗೆದುಕೊಳ್ಳುವುದು ಹೆಚ್ಚು ಪ್ರಶಸ್ತ.
ಹಿಂಗ್ವಾಷ್ಟಕ ಚೂರ್ಣ ಸೈಡ್ ಇಫೆಕ್ಟ್ ಹೊಂದಿದೆಯೇ?
• ಆಯುರ್ವೇದದ ವೈದ್ಯರ ಸಲಹೆಯಂತೆ ತೆಗೆದುಕೊಂಡ ಈ ಚೂರ್ಣದಿಂದಾಗಿ ಇದುವರೆಗೆ ಯಾವುದೇ ರೀತಿಯ ಸೈಡ್ ಇಫೆಕ್ಟ್ ಕಂಡುಬಂದಿಲ್ಲ.
• ವೈದ್ಯರು ಸೂಚಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡರೆ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳಬಹುದು.
• ಗರ್ಭಿಣಿಯರು ಹಾಗೂ ಬಾಣಂತಿಯರು ಕಡ್ಡಾಯವಾಗಿ ಆಯುರ್ವೇದಿಕ್ ವೈದ್ಯರ ಸಲಹೆಯ ಮೇರೆಗೆ ಮಾತ್ರ ತೆಗೆದುಕೊಳ್ಳುವುದು ಉಚಿತ
ಬೃಹತ್ರಿಯು ಅತ್ಯುತ್ತಮ ಗುಣಮಟ್ಟದ ಹಿಂಗ್ವಷ್ಟಕವನ್ನು ಪರಿಚಯಿಸುತ್ತಿದೆ. ಇದನ್ನು ನೀವು ಹತ್ತಿರದ ಂಙUಖಅಇಓಖಿಖಂಐ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದು.
BRIHATRI HingwastakaChurna for
Digestive health
Life is all about situations; funny, sweet, complicated or awkward and we all have been in the situation when our stomach decides to screw us with a havoc on our digestion and a trapped gas stuck in there.The distress of the gases, the heartburn and the acid reflux can turn a gleeful event into a gloomy one. Though the market is flooded with all the instant relief aids but nothing beats the efficacy and goodness of the herbal remedies from our ancient books.
Ayurveda recommends the use of Hingwastakachurna to treat disorders related to the gastro intestinal tract and its related problems. It has been used for centuries as a household remedy to treat stomach ailments to maintain proper functioning of the gastrointestinal tract. It is a panacea for indigestion and gas problem and works wonders in aiding eliminative functions like defecation, flatulence etc. As most diseases flourish from the problems in the stomach, keeping the digestive system healthy wards off many ailments.
Composition
HingwastakChurna is an Ayurvedic mixture of very safe and easily available herbs. It is made by blending Hingu (asafoetida ) with auspicious herbs like dry ginger , black pepper, long pepper, rock salt, cumin, black cumin and ajwain.
Therapeutic indications
Anorexia
Gas
Indigestion
Abdominal pain
Hypersalivation
Dull tastebuds
Belching
Research on HingwastakaChurna
Scientific research on HingwastakaChurna clarifies its efficacy on digestive disorders and gastric woes while ensuring about the safety of this medicine. It has shown calming results in heartburn and indigestion. The patients reported HingwastakaChurna not just helped relieve the stucked gases but also stopped the formation of gas by correcting the order of digestive system.
Benefits of HingwastakaChurna
HingwastakaChurna is highly effective in providing relief in gas, bloating, and spasms.
It improves metabolism.
It is widely used for improving appetite, digestion and assimilation.
It aids in downward movement and elimination of stool, flatus, urine and menses.
It helps in curing indigestion, constipation or loose motion and treating worms.
Dosage of HingwastakaChurna
For best results it should be taken (3 gm) twice a day or as prescribed by an Ayurvedic doctor. The general recommendation is taking HingwastakaChurna by blending it with Ghee. It should be taken twice or thrice a day before meal.
Side effects of HingwastakaChurna
There are no reported side effects of HingwastakaChurna when taken as prescribed by the doctor.
An overdose of the medicine can cause irritation in the stomach.
For pregnant and lactating mothers it should be taken only after consulting an Ayurvedic practioner.
Where can you get it?
BRIHATRI is introducing high quality hingvastakachurna, you can get it from your nearest store .
#AyurCentral # Ayurveda #MultiBrandAyurveda # Ayurvedic Doctor # Ayurvedic pharmacy # Ayurvedic stores # digestives #AYURVEDICDIGESTIVE# FLATULENCE # abdominal gas
Comments
Post a Comment