ಮನುಷ್ಯರ ಜೀವನದ ಸಂಜೀವಿನಿ : ತ್ರಿಫಲಚೂರ್ಣ
ಮನುಷ್ಯರ ಜೀವನದ ಸಂಜೀವಿನಿ
: ತ್ರಿಫಲಚೂರ್ಣ
ನಮ್ಮ ದೇಹ ಪ್ರತಿನಿತ್ಯ ಸೂಕ್ಷ್ಮವಾಗಿ ಶಿಥಿಲಗೊಳ್ಳುತ್ತಲೇ ಇರುತ್ತದೆ. ಹಾಗಾಗಿ ಯಾವುದಾದರೊಂದು ವ್ಯಾಧಿಯಿಂದ ಎಲ್ಲರೂ ಪೀಡಿತರೇ. ಒಬ್ಬರಿಗೆ ಹೊಟ್ಟೆಯಲ್ಲಿ ತೊಂದರೆಯಾದರೆ ಮತ್ತೊಬ್ಬರಿಗೆ ಸಂಧಿನೋವು. ಇನ್ನೊಬ್ಬರಿಗೆ ಚರ್ಮರೋಗ, ಮತ್ತೊಬ್ಬರಿಗೆ ಕಬ್ಬಿಣಾಂಶದ ಕೊರತೆ. ಮಗದೊಬ್ಬರಿಗೆ ಕಣ್ಣಿನ ಸಮಸ್ಯೆ. ಈ ದೇಹವನ್ನು ಪೀಡಿಸುವ ಈ ವ್ಯಾಧಿಗಳ ಪಟ್ಟಿ ಮುಗಿಯುವುದಿಲ್ಲ. ಇವೆಲ್ಲ ಸಮಸ್ಯೆಗಳನ್ನೂ ನಿವಾರಿಸುವ ಒಂದೇ ಒಂದು ಸಮಗ್ರ ಪರಿಹಾರವನ್ನು ಸೂಚಿಸಿ ಎಂದರೆ, ಖಂಡಿತವಾಗಿಯೂ ಅದು ‘ತ್ರಿಫಲಚೂರ್ಣ’ವೇ ಎನ್ನಬಹುದು. ಏಕೆಂದರೆ ಇದು ಮನುಷ್ಯನ ಶರೀರದ ಸಂಜೀವಿನಿ ಇದ್ದಂತೆ.
ತ್ರಿಫಲಚೂರ್ಣವು ಹೊಂದಿರುವ ಔಷಧೀಯ ಗುಣಗಳಿಂದಾಗಿ ಅದು
ಅಷ್ಟು ಪ್ರಮುಖವಾದ ಸ್ಥಾನವನ್ನು ಹೊಂದಿದೆ.
ತ್ರಿಫಲಚೂರ್ಣವು ನಮ್ಮ ದೇಹದ ರೋಗನಿರೋಧಕಶಕ್ತಿಯನ್ನು ಇಮ್ಮಡಿಗೊಳಿಸುತ್ತದೆ. ಅಷ್ಟೇ ಅಲ್ಲದೇ
ರಕ್ತದ ಶುದ್ಧೀಕರಣ ನಡೆಸಿ ರಕ್ತ ಸಂಚಾರವನ್ನು ಸರಾಗಗೊಳಿಸುತ್ತದೆ. ದೇಹದ ಚಯಾಪಚಯ
ಸಾಮರ್ಥ್ಯವನ್ನು ವರ್ಧಿಸಿ ಜೀರ್ಣವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸುತ್ತದೆ.
ತ್ರಿಫಲಚೂರ್ಣ ಎಂದರೆ...
ತ್ರಿಫಲಚೂರ್ಣವು
ಹೆಸರೇ ತಿಳಿಸುವಂತೆ ಮೂರು ಫಲಗಳನ್ನು ಸಂಸ್ಕರಿಸಿ ಮಾಡಿದ ಪುಡಿಯ ರೂಪದ್ದಾಗಿದೆ. ತ್ರಿಫಲಾ ಎಂಬ
ಶಬ್ದವು ಸಂಸ್ಕೃತಮೂಲದ್ದಾಗಿದ್ದು, ಇದರಲ್ಲಿ ತ್ರಿ ಹಾಗೂ ಫಲ ಎಂಬ ಎರಡು ಶಬ್ದಗಳಿವೆ. ತ್ರಿ
ಎಂಬುದು ಸಂಖ್ಯಾವಾಚಕವಾಗಿದ್ದು ಮೂರು ಎಂಬುದನ್ನು ಸೂಚಿಸಿದರೆ, ಫಲವೆಂಬುದು ಕಾಯಿ/ಹಣ್ಣನ್ನು
ಪ್ರತಿನಿಧಿಸುತ್ತದೆ. ಅರ್ಥಾತ್ ಮೂರುವಿಧದ ಫಲಗಳಿಂದ ಮಾಡಲ್ಪಡುವ ಪುಡಿಯೇ ತ್ರಿಫಲಾಚೂರ್ಣ. ಆ
ಮೂರು ಫಲಗಳು ಯಾವುವೆಂದರೆ, ಆಮಲಕಿ, ಹರೀತಕಿ ಮತ್ತು ಮೂರನೆಯದು ಬಿಭೀತಕಿ. ಈ ತ್ರಿಫಲವನ್ನು
ಮನುಷ್ಯನ ಬದುಕಿಗೆ ‘ಅಮೃತ’ವೆಂದು ಚರಕಸಂಹಿತೆ ಹಾಗೂ ಸುಶ್ರುತಸಂಹಿತೆಗಳಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದಲೇ ತ್ರಿಫಲದ ಮಹತ್ತ್ವವನ್ನು ಅರಿಯಬಹುದು.
ಇದರ ಪ್ರಯೋಜನವೇನೆಂದರೆ...
ತ್ರಿಫಲಚೂರ್ಣದಲ್ಲಿನ ಮೂರು ವಿಧದ ಕಾಯಿಗಳು ಇದನ್ನು
ಪ್ರಾಕೃತಿಕ ಗುಣಗಳಿಂದ ಸಮೃದ್ಧಗೊಳಿಸಿದೆ. ಇದರಲ್ಲಿರುವ ನೆಲ್ಲಿಕಾಯಿ ಅಥವಾ ಆಮಲಕಿಯು ‘ವಿಟಾಮಿನ್
ಸಿ’ಯಿಂದ ಶ್ರೀಮಂತವಾಗಿದ್ದು ರೋಗನಿರೋಧಕಶಕ್ತಿಯನ್ನು ಉತ್ತೇಜಿಸುತ್ತದೆ. ಜೊತೆಗೆ ಮುಟ್ಟಿನ
ಸಂಬಂಧಿ ಖಾಯಿಲೆಯನ್ನು ದೂರವಿರಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿ ಕಬ್ಬಿಣದ ಅಂಶವನ್ನು
ಸಮೃದ್ಧಗೊಳಿಸುವುದೂ ಅಲ್ಲದೇ ಮಿದುಳಿನ ಕಾರ್ಯಕ್ಷಮತೆಯನ್ನು ಉತ್ತೇಜಿಸುತ್ತದೆ.
ಹರೀತಕಿಯು ಕಣ್ಣಿಗೆ
ಸಂಬಂಧಿಸಿದ ದೋಷಗಳಾದ ಮಂದಾಂಧತೆ ಅಥವಾ ಗ್ಲುಕೋಮಾ, ಕಣ್ಣಿನ ಪರದೆಯ ಸಮಸ್ಯೆಗಳನ್ನು
ನಿವಾರಿಸುತ್ತದೆ. ದೇಹದಲ್ಲೆಲ್ಲಾದರೂ ಗಾಯವಾದಾಗ ಅದನ್ನು ಶೀಘ್ರವಾಗಿ ಗುಣಪಡಿಸಲು ಇದು
ನೆರವಾಗುತ್ತದೆ. ಗುಲ್ಮ ಹಾಗೂ ಮೂತ್ರಜನಕಾಂಗವನ್ನು ಸಕ್ಷಮವಾಗಿರಿಸುವುದರ ಜೊತೆಜೊತೆಗೇ ಚರ್ಮದ
ಆರೋಗ್ಯಕ್ಕೂ ಪೂರಕವಾಗಿದೆ.
ಬಿಭೀತಕಿಯು ರಕ್ತದ
ಶುದ್ಧಿಕಾರಕವಾಗಿದ್ದು ಕೂದಲಿನ ಬುಡಭಾಗವನ್ನು ಸದೃಢಗೊಳಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ
ದೇಹದಲ್ಲಿನ ಕೊಬ್ಬಿನಾಂಶವನ್ನು ಹೊರಹಾಕಿ ದೇಹದ ತೂಕವಿಳಿಸಲು ನೆರವಾಗುತ್ತದೆ. ಇದರ ಸೋಂಕುನಿವಾರಕ
ಗುಣದಿಂದಾಗಿ ದೇಹದಲ್ಲಿ ಯಾವುದೇ ರೋಗಹರಡುವ ಜೀವಾಣುವು ನಾಶ ಹೊಂದುತ್ತದೆ.
ಸಾಮಾನ್ಯವಾಗಿ
ತ್ರಿಫಲಾಚೂರ್ಣವು ಏಳರಲ್ಲಿ ನಾಲ್ಕುಭಾಗ ಆಮ್ಲವನ್ನೂ, ಎರಡು ಭಾಗದಷ್ಟು ಬಿಭೀತಕಿಯನ್ನೂ, ಒಂದು
ಭಾಗದಷ್ಟು ಹರೀತಕಿಯನ್ನೂ ಹೊಂದಿರುತ್ತದೆ. ಈ ಪ್ರಮಾಣವು ಉತ್ಪನ್ನದಿಂದ ಉತ್ಪನ್ನಕ್ಕೆ
ವ್ಯತ್ಯಾಸವನ್ನು ಹೊಂದಬಹುದು. ಇವು ಮೂರೂ ಕೂಡ ಪ್ರಖರ ಔಷಧೀಯ ಗುಣಗಳಿಂದ ಕೂಡಿದ್ದು, ಇವು
ಮೂರನ್ನೂ ಹೊಂದಿರುವ ತ್ರಿಫಲಾಚೂರ್ಣವು ಆರೋಗ್ಯಕಾರಕಗಳಿಂದ ಎಷ್ಟು ಸಮೃದ್ಧವಾಗಿದೆ ಎಂಬುದನ್ನು
ಮತ್ತೆ ವಿವರಿಸಬೇಕಿಲ್ಲ.
ತ್ರಿಫಲಚೂರ್ಣದ ಉಪಯುಕ್ತತೆ ;
ಇದು ದೇಹದ
ರೋಗನಿರೋಧಕತೆಯನ್ನು ವರ್ಧಿಸುವುದಲ್ಲದೇ ರಕ್ತಶುದ್ಧಿಯನ್ನೂ ನಡೆಸುತ್ತದೆ. ಜೊತೆಗೆ
ಜೀರ್ಣಪ್ರಕ್ರಿಯೆಯನ್ನು ಸುವ್ಯವಸ್ಥಿತವಾಗಿಡುವುದರಿಂದ ದೇಹದಲ್ಲಿನ ಅನಗತ್ಯ ಕೊಬ್ಬು ಸಂಗ್ರಹ
ಕಡಿಮೆಯಾಗುತ್ತದೆ. ಸಕ್ಕರೆ ಖಾಯಿಲೆ ಇರುವವರಿಗೂ ಕೂಡ ಇದರ ಸೇವನೆ ಉಪಯುಕ್ತವೆನಿಸಿದೆ. ಹಾಗೆಯೇ
ಅನೇಕರನ್ನು ಕಾಡುವ ಮಲಬದ್ಧತೆಯನ್ನು ಕೂಡ ಗಮನಾರ್ಹವಾಗಿ ಕಡಿಮೆಗೊಳಿಸುತ್ತದೆ.
ಇಷ್ಟೇ ಅಲ್ಲದೇ ಈ
ಚೂರ್ಣವು ಚರ್ಮರೋಗಗಳ ನಿಯಂತ್ರಕವೂ ಆಗಿರುವುದರಿಂದ ಇದರ ಬಳಕೆಯು ಚರ್ಮದಲ್ಲಿನ ಮೃತಜೀವಕೋಶಗಳನ್ನು
ಹೊರಹಾಕಿ, ಚರ್ಮಕ್ಕೊಂದು ಹೊಸಕಾಂತಿಯನ್ನು ತಂದುಕೊಡುತ್ತದೆ. ಜೊತೆಗೆ ಇದರ ಉರಿಯೂತನಿವಾರಕ ಗುಣವು
ದೇಹದಲ್ಲಿರಬಹುದಾದ ಸಂಧಿವಾತವನ್ನು ನಿವಾರಿಸುತ್ತದೆ. ತಜ್ಞರು ಅಭಿಪ್ರಾಯಪಡುವಂತೆ ಅನೇಕ ವಿಧದ
ಕ್ಯಾನ್ಸರ್ ರೋಗವನ್ನು ತಡೆಯುವಲ್ಲಿ ಕೂಡ ಈ ಚೂರ್ಣ ಪರಿಣಾಮಕಾರಿಯಾಗಿದೆ.
ತ್ರಿಫಲಾ ಚೂರ್ಣದ
ನಿರಂತರ ಸೇವನೆಯಿಂದಾಗಿ ಒತ್ತಡ ಹಾಗೂ ಅಶಕ್ತತೆ ಕಡಿಮೆಗೊಳ್ಳುವುದರಿಂದ, ಬುದ್ಧಿಶಕ್ತಿ
ವರ್ಧಿಸುವುದಲ್ಲದೇ ಏಕಾಗ್ರಶಕ್ತಿಯನ್ನು ಇಮ್ಮಡಿಗೊಳಿಸುತ್ತದೆ. ಹಾಗಾಗಿ ಇದು ವಿದ್ಯಾರ್ಥಿಗಳಿಗೂ
ಬಹಳ ಉಪಯುಕ್ತವಾಗಿದೆ.
ಇದನ್ನು ಹೀಗೆಲ್ಲ ಸೇವಿಸಬಹುದು:
ತ್ರಿಫಲಾವನ್ನು
ಪುಡಿಯ ರೂಪದಲ್ಲೂ, ಮಾತ್ರೆಯ ರೂಪದಲ್ಲೂ, ಕ್ಯಾಪ್ಸೂಲಿನ ರೂಪದಲ್ಲೂ ಸೇವಿಸಬಹುದು. ಸಾಮಾನ್ಯವಾಗಿ
ರಾತ್ರಿ ಮಲಗುವ ಮುನ್ನ ಒಂದು ಟೀ ಸ್ಪೂನ್ ನಷ್ಟು ಪ್ರಮಾಣದಲ್ಲಾಗಲೀ, ಒಂದು ಮಾತ್ರೆಯನ್ನಾಗಲೀ ಉಗುರು
ಬೆಚ್ಚಗಿನ ನೀರಿನ ಜೊತೆ ಸ್ವೀಕರಿಸುವುದು ಉತ್ತಮ. ರಾತ್ರಿ ಊಟದಿಂದ ಎರಡು ತಾಸಿನ ಅವಧಿಯ
ಅಂತರವನ್ನು ಔಷಧಿ ಸ್ವೀಕರಿಸುವಾಗ ಇಟ್ಟುಕೊಳ್ಳುವುದು ಗಮನೀಯ ಸಂಗತಿಯಾಗಿದೆ. ಬೇಕಿದ್ದರೆ ಇದನ್ನು
ಇದರ ಪುಡಿಯಿಂದ ನಿರ್ಮಿಸಲಾದ ಚಹಾದ ರೂಪದಲ್ಲಿಯೂ ಸ್ವೀಕರಿಸಬಹುದು.
ತೆಗೆದುಕೊಳ್ಳಬೇಕಾದ ಎಚ್ಚರಿಕೆ:
ಇದನ್ನು
ಸ್ವೀಕರಿಸುವಾಗ ಎಚ್ಚರಿಕೆ ವಹಿಸಬೇಕಾದ ಸಂಗತಿಯೆಂದರೆ ತೀವ್ರ ಅತಿಸಾರವಿರುವವರು ಹಾಗೂ
ಗರ್ಭಿಣಿಯರು ಸ್ವೀಕರಿಸಬಾರದು. ಜೊತೆಗೆ ಕಡಿಮೆ ಭಾರದ ಸಮಸ್ಯೆಯಿಂದ ಬಳಲುತ್ತಿರುವವರೂ ಕೂಡ
ಇದನ್ನು ಸ್ವೀಕರಿಸದಿರುವುದು ಉತ್ತಮ. ಯಾಕೆಂದರೆ ಇದು ತೂಕವನ್ನು ಇನ್ನಷ್ಟು ಕಡಿಮೆಗೊಳಿಸುತ್ತದೆ.
ಜೊತೆಗೆ ಎಷ್ಟು ಪ್ರಮಾಣದಲ್ಲಿ ಸ್ವೀಕರಿಸಬೇಕು ಎಂಬುದನ್ನೂ ತಜ್ಞ ಆಯುರ್ವೇದಿಕ್ ವೈದ್ಯರ ಸಲಹೆಯ
ಮೇರೆಗೇ ತೆಗೆದುಕೊಳ್ಳುವುದು ಸಮರ್ಪಕ.
ಇದು ದೊರೆಯುವ ಸ್ಥಳ:
ಬೃಹತ್ರಿ ತ್ರಿಫಲಾ
ಚೂರ್ಣವು ಎಲ್ಲ 57 ಆಯುರ್ ಸೆಂಟ್ರಲ್ ಕೇಂದ್ರಗಳಲ್ಲಿ ಲಭ್ಯವಿದೆ. ಜೊತೆಗೆ ಇಲ್ಲೇ ತಜ್ಞ
ಆಯುರ್ವೇದಿಕ್ ವೈದ್ಯರೂ ಇರುವುದರಿಂದ ಸೂಕ್ತವಾದ ಸಲಹೆಯನ್ನೂ ಪಡೆಯಬಹುದು.
TriphalaChurna , Nectar for life
Triphalachurna
increases immunity, purifies blood and improves blood circulation. It
stimulates the body metabolism and encourages the efficient working of
digestive system.
Triphalachurna is refined and powdered form of three fruits . The word triphala
comes from two Sanskrit words,Tri which means three and phala means fruits. The
powder of three fruits namely, Amalaki, Haritaki and Bibhitaki is
triphalachurna.Triphala is termed as ‘the nectar for life’ in CharakaSamhita
and SusrutaSamhita.
The constituents
of triphala are loaded with the goodness of nature.Amla which is rich in
Vitamin C helps in boosting immunity, treats menstrual problems, improves iron
absorption into the blood and stimulates brain functioning and mineral
absorption.
Haritaki prevents
eye diseases like cataract and glaucoma, promotes healing of wounds and ulcers,
works for spleen and liver and is also good for skin.
Bibhitaki is a
blood purifier, strengthens hair roots, removes body fat and has antibacterial
and antiviral qualities.
Triphalachurna
usually contains four parts of amla, two parts of Bibhitaki, and one part of
Haritaki. However, this ratio can vary depending on the product and the needs
of an individual. The three together work as a powerful combination in
addressing various problems.
Triphalachurna
increases immunity, purifies blood and improves blood circulation. It
stimulates the body metabolism and encourages the efficient working of
digestive system. As a result, the body fat can be reduced.
It is helpful even
in case of diabetes mellitus. Triphalachurna is also beneficial in cleansing
the colon and is recommended in case of constipation.
Triphalachurna
benefits in skin related problems as well. It removes dead cells and
rejuvenates the skin cells to bring natural glow on skin. Its anti-inflammatory
property helps a lot in arthritis. Experts believe that it fights various
cancers also.
It makes the brain
sharp and attentive by cutting off anxiety and nervousness. Hence it is good
for students.
Triphala can be consumed in the form of powder or tablet /capsule. Generally,
the recommended dosage for triphala is one teaspoon or one tablet/ capsule with
lukewarm water before going to bed. A gap of about 2 hours after dinner needs
to be maintained. It can even be consumed in the form of tea made with the
churna.
However, it is not
recommended for acute diarrhea or during pregnancy. Underweight persons should
avoid using the churna as it decreases weight. Even the dosage needs to be in
accordance with the advice of a qualified Ayurvedic practitioner.
TRIPHALA CHURNA IS
AVAILABLE IN ALL
57 AyurCentral stores.
CALL US NOW 080 -
2356 2056
#AyurCentral # Ayurveda #MultiBrandAyurveda # Ayurvedic Doctor #
Ayurvedic pharmacy # Ayurvedic stores # Digestive#Triphala #metabolism#wellness
#Constipation #Weight loss # healthy
digestion and absorption #Gentlymaintainsregularity#Assists
natural internal cleansing #Natural anti oxidant
Comments
Post a Comment