Posts

Image
ಸೋರಿಯಾಸಿಸ್ ವ್ಯಾಧಿಯ ನಿವಾರಕ ಸೋರಾಫ್ರಿ ಎಣ್ಣೆ ( PSORAFRI OIL ) ಚರ್ಮದ ಮೇಲೆ ಬಣ್ಣ ಬದಲಾಗಿ, ಅದೇ ವೃತ್ತಾಕಾರವಾಗಿ ಸಿಪ್ಪೆ ಸುಲಿದಂತಾಗಿ, ನಂತರ ತುರಿಕೆಯೊಂದಿಗೆ ವೃದ್ಧಿಸುವ ಒಂದು ರೀತಿಯ ಚರ್ಮವ್ಯಾಧಿ ಹಲವರಿಗೆ ಕಾಡುತ್ತದೆ. ಇದು ಸಂಪೂರ್ಣ ಕಡಿಮೆಯಾಗದಿದ್ದರೂ ಗಣನೀಯ ಪ್ರಮಾಣದಲ್ಲಿ ಇದು ಹರಡುವುದನ್ನೂ, ಹೆಚ್ಚಾಗುವುದನ್ನೂ ತಡೆಯಬಹುದು. ಈ ರೋಗಕ್ಕೆ ಅತ್ಯುತ್ತಮ ಔಷಧವೆಂದರೆ ಅದು ‘ಸೋರಾಫ್ರಿ ತೈಲ’ .   ಸೋರಿಯಾಸಿಸ್ ವ್ಯಾಧಿಗೆ ಆಯುರ್ವೇದದಲ್ಲಿ ಮಾತ್ರ ಪರಿಣಾಮಕಾರಿಯಾದ ಔಷಧಿ ಸಿಗುವುದಕ್ಕೆ ಸಾಧ್ಯ. ಈ ಸೋರಾಫ್ರಿ ತೈಲವೂ ಕೂಡ ಆಯುರ್ವೇದಿಕ್ ಔಷಧವಾಗಿದ್ದು, ವೈದ್ಯಕೀಯ ಪ್ರಯೋಗಶಾಲೆಯಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆಗೊಳಪಟ್ಟದ್ದಾಗಿದೆ. ಜೊತೆಗೆ ಅತ್ಯಂತ ಸಮರ್ಥ ಹಾಗೂ ಅಪಾಯ ರಹಿತ ಔಷಧವೆಂದು ಪ್ರಮಾಣಿತವಾಗಿದೆ.         ಇದರ ಘಟಕಗಳು : ಸೋರಾಫ್ರಿ ತೈಲವು ಗಿಡಮೂಲಿಕಾ ಔಷಧವಾಗಿದ್ದು ಅಜಮರವೆಂಬ ಸಸ್ಯದ ಎಲೆಯ ಸಾರದಿಂದ ನಿರ್ಮಿತವಾಗಿದೆ. ಇದರ ಜೊತೆಗೆ ಬೇವಿನ ಎಲೆ, ತೆಂಗಿನ ಕಾಯಿಯ ಹಾಲು, ಶುದ್ಧ ಗಂಧಕಗಳೂ ನಿರ್ದಿಷ್ಟ ಪ್ರಮಾಣದಲ್ಲಿರುತ್ತವೆ. PSORAFRI OIL ನ ಉಪಯುಕ್ತತೆಗಳು: ·         ಸೋರಾಫ್ರಿ ತೈಲವು ಸೋರಿಯಾಸಿಸ್ ಎಂಬ ಚರ್ಮವ್ಯಾಧಿಯ ಮೂಲ ಕಾರಕಗಳನ್ನು ನಿಯಂತ್ರಿಸುತ್ತದೆ. ·    ...
Image
ಅಲೋವೆರಾ (ಲೋಳೆಸರ)ದಲ್ಲಿದೆ ಚರ್ಮ ಸುರಕ್ಷತೆಯ ಮರ್ಮ ನೋಡುವುದಕ್ಕೆ ಮುಳ್ಳಿನ ಚರ್ಮ ಇದರದ್ದು. ಆದರೆ ಇದನ್ನೇ ನಮ್ಮ ಚರ್ಮಕ್ಕೆ ಲೇಪಿಸಿಕೊಂಡರೆ ನಮ್ಮ ತ್ವಚೆಗೆ ಅತ್ಯಪೂರ್ವವಾದ ಕಾಂತಿಯನ್ನೊದಗಿಸುವ ಈ ಗಿಡ ನಮ್ಮ ನಿಮ್ಮೆಲ್ಲರ ಮನೆಯ ಕೈದೋಟದಲ್ಲಿನ ಖಾಯಂ ಸದಸ್ಯ. ಬಹುಶಃ ನಮ್ಮ ಚರ್ಮವನ್ನು ಸುಸ್ಥಿತಿಯಲ್ಲಿಡಲು ಹಾಗೂ ಕಾಂತಿಯುತವಾಗಿಸಲು ದೇವರು ಕೊಟ್ಟ ಒಂದು ದಿವ್ಯವಾದ ಕೊಡುಗೆ ಈ ಲೋಳೆಸರ ಎಂದು ಹೇಳಿದರೂ ಅದು ಅತಿಶಯೋಕ್ತಿ ಅಲ್ಲವೇನೋ. ಅಲೋವೆರಾ ಎಂದೂ ಕರೆಯಲ್ಪಡುವ ಇದರ ಔಷಧೀಯ ಗುಣ ಹಾಗೂ ಇದು ಹೊಂದಿರುವ ಬಹುಮುಖೀ ಪ್ರಯೋಜನದಿಂದಾಗಿ ಎಲ್ಲರ ಸೌಂದರ್ಯದ ರಕ್ಷಕ ಎಂದೇ ಇದನ್ನು ಕರೆಯಬಹುದು. ತಮ್ಮ ತ್ವಚೆ ಸ್ಫಟಿಕದಂತೆ ಹೊಳಪಿನಿಂದ ಕೂಡಿ ಎಲ್ಲರನ್ನೂ ಆಕರ್ಷಿಸಬೇಕು ಎಂದು ಯಾರು ತಾನೇ ಬಯಸುವುದಿಲ್ಲ? ಇಳಿವಯಸ್ಸಿನಲ್ಲೂ ಸುಕ್ಕುಗಟ್ಟದ ಚರ್ಮವನ್ನು ಪಡೆಯುವುದಕ್ಕೆ ಯಾರು ತಾನೇ ಬೇಡ ಎನ್ನುತ್ತಾರೆ? ನಮ್ಮ ಬಹುಕಾಲದ ಈ ಎಲ್ಲ ಹಂಬಲವನ್ನು ಪೂರ್ಣಗೊಳಿಸಬಲ್ಲ ಏಕೈಕ ಗಿಡಮೂಲಿಕೆಯೆಂದರೆ ಅದು ಅಲೋವೆರಾ. ಇದರಿಂದ ತಯಾರಿಸಿದ ಜೆಲ್ ತನ್ನದೇ ಆದ ರೀತಿಯಲ್ಲಿ ನಮ್ಮ ಸೌಂದರ್ಯವನ್ನು ರಕ್ಷಿಸಿ, ಪೋಷಿಸುತ್ತದೆ. ಅದೆಷ್ಟೋ ಸಮಸ್ಯೆಗಳಿಗೆ ಸಮಗ್ರ ಪರಿಹಾರವನ್ನು ನೀಡುವ ಈ ಅಲೋವೆರಾ ಎಂಬ ಮಾಂತ್ರಿಕ ಎಲೆಯು ಒಳಗೊಂಡಿರುವ ಕೆಲವು ಪ್ರಯೋಜನಗಳನ್ನು ನೋಡೋಣ ಬನ್ನಿ: ಬೃಹತ್ರಿ ಅಲೋವೆರಾ ಜೆಲ್ : 1 . ಚರ್ಮವನ್ನು ಒಣಗದಂತೆ ಆರ್ದೃತೆಯನ್ನು ಕಾಪಾಡುತ್ತದ...
Image
ಹೊಟ್ಟು ನಿವಾರಣೆಯ ಗುಟ್ಟು: ಡ್ಯಾಂಡ್ರಾಲ್ ಆಯಿಲ್ ನಮ್ಮ ಸೌಂದರ್ಯದ ರಹಸ್ಯವಿರುವುದೇ ಕೂದಲಿನಲ್ಲಿ. ನೀಳವಾದ ವೇಣಿ ಯಾರನ್ನು ತಾನೇ ಸೆಳೆಯುವುದಿಲ್ಲ? ಹಾಗಾಗಿಯೇ ಎಲ್ಲರೂ ತಮ್ಮ ಸೌಂದರ್ಯದ ರಕ್ಷಣೆಗಾಗಿ ‘ಕೂದಲ ಸಂಗಮ ದೇವ’ರಿಗೇ ಮೊರೆಹೋಗುತ್ತಾರೆ. ಆದರೆ ಈ ಕೂದಲ ರಕ್ಷಣೆಯೂ ಅಷ್ಟೇನು ಸುಲಭವಲ್ಲ. ಬೆಣ್ಣೆಯಲ್ಲಿ ಕೂದಲು ತೆಗೆದಷ್ಟೇ ನಾಜೂಕಿನಿಂದ ಇದರ ಪಾಲನೆ ಮತ್ತು ಪೋಷಣೆಯನ್ನು ಮಾಡಬೇಕಾಗುತ್ತದೆ. ಕೂದಲ ಬುಡ ಸ್ವಚ್ಛವಿಲ್ಲದಿದ್ದರೆ ಉಂಟಾಗುವ ಮೊದಲ ಸಮಸ್ಯೆಯೆಂದರೆ ಅದು ಹೊಟ್ಟು. ಅದರಲ್ಲೂ ವಿಶೇಷವಾಗಿ ನಮ್ಮ ಚೆಂದದ ತರುಣಿಯರಿಗೆ ಈ ಹೊಟ್ಟು ಕೊಡುವ ಸಮಸ್ಯೆ ಹೇಳತೀರದು. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ನೆಮ್ಮದಿಯಿಂದ ಇರಬಹುದೇನೋ, ಆದರೆ ತಲೆಯಲ್ಲಿ ಹೊಟ್ಟಿದ್ದರೆ ಮಾತ್ರ ಅದು ನಮ್ಮನ್ನು ಹುಟ್ಲಿಲ್ಲ ಎನಿಸುವಂತೆ ಮಾಡುವುದು ಪಕ್ಕಾ. ಇಂಥ ವೇಣೀಸಂಹಾರದ ಸೂತ್ರಧಾರನಾಗಿರುವ ಹೊಟ್ಟಿನ ಸಮಸ್ಯೆಗೆ ಪರಿಹಾರವಾಗಿ ಒಂದು ಆಯುರ್ವೇದಿಕ್ ದಿವ್ಯೌಷಧದ ಪರಿಚಯ ಇಲ್ಲಿದೆ. ಹೊಟ್ಟಿಗೆ ಶಾಂಪೂವೇಕೆ ಬೇಡ?           ಹೊಟ್ಟು ಎಂದ ಕೂಡಲೇ ನಮಗೆ ನೆನಪಾಗುವುದು ಟಿವಿಯ ಜಾಹೀರಾತುಗಳಲ್ಲಿ ಕಾಣಿಸುವ ರಂಗುರಂಗಿನ ಶಾಂಪೂಗಳು. ಆ ಜಾಹೀರಾತಿನಲ್ಲಿ ತೋರಿಸುವ ಆಕರ್ಷಕ ಕೂದಲನ್ನು ನೋಡಿಯೇ ನಾವು ಆ ಶಾಂಪೂಗಳನ್ನು ಕೊಂಡುಬಿಡುತ್ತೇವೆ. ಆದರೆ ಅನೇಕ ವಿಧದ ರಾಸಾಯನಿಕಗಳನ್ನು ಬಳಸಿ ತಯಾರಿಸಲಾದ ಆ ಬಣ್ಣ ...